'Karwar Food Fest" will begin from December 26th to December 30th in Kali River Garden at Karwar, organized by Uttara Kannada district administration. <br /> <br /> <br />ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸದಾ ಒಂದಿಲ್ಲೊಂದು ಚಟುವಟಿಕೆಗಳನ್ನು ಆಯೋಜಿಸುತ್ತಿರುವ ಉತ್ತರಕನ್ನಡ ಜಿಲ್ಲಾಡಳಿತ ಈ ಬಾರಿ ಪ್ರಥಮ ಬಾರಿಗೆ 'ಕಾರವಾರ ಆಹಾರ ಮೇಳ' ಆಯೋಜಿಸಲು ಸಜ್ಜಾಗಿದೆ.ಕಾರವಾರದ ಕಾಳಿ ನದಿ ದಂಡೆಯ ಮೇಲಿರುವ ಕಾಳಿ ರಿವರ್ ಗಾರ್ಡನ್ ನಲ್ಲಿ ಡಿಸೆಂಬರ್ 26 ರಿಂದ ಡಿ. 30ರ ವರೆಗೆ ಈ ಮೇಳವನ್ನು ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ರಾಜ್ಯದ ಕರಾವಳಿ ಭಾಗದ ಆಹಾರಗಳು ಹೆಚ್ಚಿನ ಆಕರ್ಷಣೆಯಾಗಲಿದ್ದು, ಮಂಗಳೂರು, ಕಾರವಾರದ ಸಮುದ್ರ ಆಹಾರ ಸೇರಿದಂತೆ 70 ಬಗೆ-ಬಗೆಯ ತರಹೇವಾರಿ ಆಹಾರ ಜನರ ಬಾಯಲ್ಲಿ ನೀರೂರಿಸಲಿದೆ.ಅಷ್ಟೇ ಅಲ್ಲದೇ ಸಂಗೀತ ಪ್ರಿಯರಿಗಾಗಿ ಈ ಆಹಾರ ಮೇಳದಲ್ಲಿ ವಿಶೇಷವಾಗಿ ಸಂಜೆ 7ರಿಂದ ರಾತ್ರಿ 9.30 ರವರೆಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೆಲ್ಲ ಇದೆ ಇನ್ನೇನು ಬೇಕು ಈ ಮೇಳದಲ್ಲಿ ಬಾಗವಹಿಸಿ ಊಟ ರುಚಿ ಸವಿಯಿರಿ. ಮೇಳದಲ್ಲಿ ರುಚಿ ಸವಿಯಲು ಇಚ್ಛಿಸುವವರಿಗೆ ಕೇವಲ 20 ರು. ಪ್ರವೇಶ ಶುಲ್ಕ ಇರಲಿದೆ. <br />